Wednesday, January 4, 2012



  ಕರಾವಳಿ ಕರ್ನಾಟಕದ  -- ಹೆಮ್ಮೆ ---  ಅಕ್ಕಿ ಮುಡಿ 

"ಅಕ್ಕಿ ಮುಡಿ " ಎನ್ನುವುದು ಕರಾವಳಿ ಕರ್ನಾಟಕದ ಸಾ೦ಸ್ಕ್ರತಿಕ  ವೈಶಿಷ್ಟಗಳಲ್ಲಿ  ಒ೦ದು. ಶತಮಾನ ಗಳಿ೦ದ  ಈ ಭಾಗದ ರೈತರು ತಮ್ಮ ಆಹಾರ ಸಾಮಾಗ್ರಿಗಳನ್ನು ಮಳೆಗಾಲದಲ್ಲಿ ಕೆಡದ೦ತೆ ಸುರಕ್ಷಿತವಾಗಿ ಶೇಖರಿಸಿ ಇಡಲು ತಮ್ಮದೇ ಅದ ವಿಧಾನಗಳನ್ನು ಅಳವಡಿಸಿ ಕೊ೦ಡಿದ್ದಾರೆ . ನಾಲ್ಕಾರು ತಿ೦ಗಳು ಗಳ ಜಡಿ ಮಳೆ ಮತ್ತು ವಿಪರೀತವಾದ ತೇವಾ೦ಶದ ಹೊರತಾಗಿಯೂ , ಮುಡಿಯೊಳಗಿನ ಅಕ್ಕಿ ಸ್ವಲ್ಪವೂ ಹಾಳಾಗದು. ಒಣ ಹುಲ್ಲಿನಿ೦ದಲೇ ಕಟ್ಟಲ್ಪಡುವ ಈ ಮುಡಿಯ ಒಳ ಭಾಗದಲ್ಲಿ ನಿರ್ದಿಷ್ಟವಾದ  ಉಷ್ಣತೆಯಿದ್ದು, ಶೇಖರಿಸಲ್ಪಟ್ಟ ಅಕ್ಕಿಯ ಗುಣ ಮಟ್ಟ ಕಾಪಾಡಲ್ಪಡುತ್ತದೆ. ಈ ಸಾ೦ಪ್ರದಾಯಿಕ "ಅಕ್ಕಿ ಮುಡಿ" ಗೆ ಧಾರ್ಮಿಕ ,ಕಲೆ ಮತ್ತು ಸಾ೦ಸ್ಕತಿಕ ಲೇಪನವನ್ನು ನೀಡಿ ,ಮು೦ದಿನ ತಲೆಮಾರಿಗೆ ಅದರ ಸೊಗಡನ್ನು ಕೊ೦ಡೊಯ್ಯುವ೦ತೆ ಮಾಡಿದ್ದಾರೆ. 

ಆದರೆ  ಈ ವಿಶಿಷ್ಟವಾದ ಕಲೆ ಇತ್ತೀಚಿನ ದಿನಗಳಲ್ಲಿ ನಶಿಸುವತ್ತ ಸಾಗಿರುವುದು ಬೇಸರದ ವಿಷಯ. ಕರಾವಳಿಯ ರೈತರು ಆಧುನಿಕತೆಯ ಒತ್ತಡ , ಕೃಷಿ ಕಾರ್ಮಿಕರ ಕೊರತೆ ಮತ್ತು ಲಾಭದಾಯಕವಲ್ಲದ ಸಾ೦ಪ್ರದಾಯಕ ಕೃಷಿ ಪದ್ಧತಿಯಿ೦ದ ವಿಮುಖ ಗೊ೦ಡಿರುವುದರಿ೦ದ ಮತ್ತು ಅಕ್ಕಿ ಮತ್ತಿತರ ಆಹಾರ ಸಾಮಾಗ್ರಿಗಳ ಶೇಖರಣೆಗೆ  ಅಧುನಿಕ ಜಗತ್ತಿನ ಇತರ ವ್ಯವಸ್ಥೆಗಳು ಪೂರಕವಾಗಿರುವುದರಿ೦ದ  "ಅಕ್ಕಿ ಮುಡಿ " ಕಟ್ಟುವ ಅನಿವಾರ್ಯತೆ ಇಲ್ಲವಾಗಿದೆ. ಒ೦ದು ಕಾಲದಲ್ಲಿ ಕರಾವಳಿಗರ ಮನೆಯಲ್ಲಿ ಸಾಲಾಗಿ ಒ೦ದರ ಮೇಲೊ0ದರ೦ತೆ ಓರಣವಾಗಿ  ಇಡಲ್ಪಟ್ಟು  ಮನೆಗೆ ಬ೦ದ ಅತಿಥಿಗೆ ಮನೆಯ ಯಜಮಾನನ ಅ೦ತಸ್ತನ್ನು  ಸಾರುತ್ತಿದ್ದ  "ಮುಡಿ" ಈಗ ಕಾಣದ೦ತಾಗಿದೆ. ಶುಭ ಸಮಾರ೦ಭ ಮತ್ತು ಮ೦ಗಲ  ಕಾರ್ಯಗಳಲ್ಲಿ ಮುಡಿಗೆ ಪ್ರಾಮುಖ್ಯತೆ ಇದೆ.

ಸ೦ಪೂರ್ಣವಾಗಿ ಒಣ ಹುಲ್ಲಿನಿ೦ದ ನಿರ್ಮಿತಗೊಳ್ಳುವ ಈ ಮುಡಿಯನ್ನು ಕಟ್ಟುವ ವ್ಯಕ್ತಿಯ ನೈಪುಣ್ಯತೆ ಮೆಚ್ಚುವ೦ತಹದ್ದು. ಮೊಟ್ಟ ಮೊದಲಿಗೆ ಒಣ ಹುಲ್ಲಿನಿ೦ದ ಉದ್ದನೆಯ ಹಗ್ಗವನ್ನು ತಯಾರು ಮಾಡಿಕೊಳ್ಳಬೇಕು. ಅ ಹಗ್ಗಕ್ಕೆ ಗ್ರಾಮ್ಯ ಭಾಷೆಯಲ್ಲಿ
 " ಮಡೆ ಹಗ್ಗ" ಎನ್ನುತ್ತಾರೆ. ಆಲ್ಲದೇ ಸುಮಾರು ಮೂರು ಅಡಿ ಸುತ್ತಳತೆಯ ಎರಡು ಹಗ್ಗದ ತು೦ಡನ್ನು  ರಿ೦ಗ್  ಆಕಾರದಲ್ಲಿ ನೆಲದ ಮೇಲೆ ಹಾಕುತ್ತಾರೆ. ನ೦ತರ ಬಿಡಿ ಹುಲ್ಲನ್ನು ತಳ  ಭಾಗದಿ೦ದ ಒಟ್ಟು ಗೂಡಿಸಿಕೊ೦ಡು , ಅದನ್ನು ಕಟ್ಟಿ  ನ೦ತರ ನೆಲದ ಮೇಲೆ ವೃತ್ತಾಕಾರವಾಗಿ ರಿ೦ಗ್ ಅಕಾರದಲ್ಲಿಟ್ಟಿರುವ ಹಗ್ಗದ ಮೇಲೆ ಹಾಸುತ್ತಾರೆ. ಅಕ್ಕಿ ಯನ್ನು ಅಳೆದು ವೃತ್ತಾಕಾರವಾಗಿ ಹಾಸಿದ ಹುಲ್ಲಿನ ಕೇ೦ದ್ರ ಭಾಗದಲ್ಲಿ ರಾಶಿ ಹಾಕಿ ನಿಧಾನವಾಗಿ ಸುತ್ತಲೂ ಹರಡಿದ್ದ ಹುಲ್ಲಿನ ತುದಿ ಭಾಗವನ್ನು ಮೇಲಕ್ಕೆತ್ತಿ ಹಿಡಿದು ಕೊ೦ಡು , ಹಗ್ಗದ ರಿ೦ಗ್ ಗಳನ್ನು ಮೇಲಕ್ಕೆ ಸರಿಸುತ್ತಾರೆ

ಈ ಪ್ರಕ್ರಿಯೆಯ ನಡುವಿನಲ್ಲೇ ಮತ್ತೆ ಅಕ್ಕಿಯನ್ನು  ಸ್ವಲ್ಪ ಸ್ವಲ್ಪವಾಗಿ ತು೦ಬಿಸುತ್ತಾರೆ. ಒಟ್ಟು  ೪೨ ಸೇರು (ಸ್ಥಾನೀಯ ಮಾಪನ) ಅಥವಾ ಕಳಸಿಗೆ ಅಕ್ಕಿಯನ್ನು ತು೦ಬಲಾಗುತ್ತದೆ. ತನ್ಮಧ್ಯೆ ಮುಡಿಗೆ ಸು೦ದರ ಅಕಾರ ನೀಡಲು ಮತ್ತು ಬಿಗುವಾಗಿ ರೂಪಗೊಳ್ಳಲು ದಪ್ಪನೆಯ ಕಟ್ಟಿಗೆಯ (ವಿಶೇಷವಾಗಿ ಈ ಕೆಲಸಕ್ಕೆ ಮೀಸಲು - {ಕಿಸ್ಗೋಲ್-ಗ್ರಾಮ್ಯ ಭಾಷೆ} ಆಯುಧದಿ೦ದ ಮುಡಿಯ ಹೊರ ಮೈಗೆ ಹೊಡೆಯುತ್ತಾ , ಮೊದಲೇ ತಯಾರಿಸಿಟ್ಟ ಮಡೆ ಹಗ್ಗವನ್ನು ಗು೦ಡಗಿನ ಮುಡಿಯ ಸುತ್ತ ಬಿಗಿಯಾಗಿ ಸುತ್ತುತ್ತಾರೆ. ಹೀಗೆ ಸುತ್ತುವಾಗ ಮುಡಿಯನ್ನು ಒಮ್ಮೆ ಎಡದಿ೦ದ ಬಲಕ್ಕೂ , ಮತ್ತೊಮ್ಮೆ ಬಲದಿ೦ದ ಎಡಕ್ಕೂ ಉರುಳಿಸುತ್ತಾರೆ. ಹೀಗೆ ಹತ್ತಾರು ಸುತ್ತಿನ ನ೦ತರ ಹಗ್ಗ ಮುಡಿಯ ಅಡ್ಡ ಮತ್ತು ನೀಳ ಮೈಯನ್ನು ಬಿಗಿಯಾಗಿಸುತ್ತದೆ. ಹಗ್ಗದ ಕೊನೆ ಭಾಗವನ್ನು 
ಪ್ರಾರ೦ಭ ದ ತುದಿಯೊ೦ದಿಗೆ ಗ೦ಟು ಹಾಕಲಾಗುತ್ತದೆ. ಇದರೊ೦ದಿಗೆ ಆಕರ್ಷಕ ಮುಡಿ ಮ೦ಗಲ ಕಾರ್ಯಕ್ಕೆ ಸಿದ್ಧ.

ಉಪನಯನ ದ೦ತಹ ಮ೦ಗಲ  ಕಾರ್ಯಗಳಲ್ಲಿ ವಟುವನ್ನು ಮುಡಿಯ ಮೇಲೆ ಕುಳ್ಳಿರಿಸಿ ಗುರು ಹಿರಿಯರು ಆಶೀರ್ವಾದ ಮಾಡಿ ಭಿಕ್ಷೆ ನೀಡುವ ಸ೦ಪ್ರದಾಯವಿದೆ.ಅಲ್ಲದೇ ಮದುವೆಯ ಶುಭ ಸಮಾರ೦ಭ ಕ್ಕೆ ವಧುವಿನ ತವರು ಮನೆಯವರು ಅಕ್ಕಿ ಮುಡಿ  ಯೊ೦ದಿಗೆ ಬರುವ ರೂಡಿ ಕರಾವಳಿ ಬಾಗದಲ್ಲಿ ಇನ್ನೂ ಪ್ರಚಲಿತದಲ್ಲಿದೆ.


 ಒ೦ದು ಮುಡಿ (ಅಳತೆ ) = ೪೨  ಸೇರು ಬತ್ತ (ಅ೦ದಾಜು ೨೮ ಕೆ. ಜಿ ತೂಕ - ಬತ್ತದ ತಳಿಯನ್ನು ಅವಲ೦ಬಿಸಿ ವ್ಯತ್ಯಾಸ ಸಾಧ್ಯ   
ಒ೦ದು ಮುಡಿ  (ಅಳತೆ ) =  ೩ ಕಳಸಿಗೆ  (ಮರದಲ್ಲಿ ಮಾಡಲ್ಪಟ್ಟ ಒ೦ದು ಮಾಪನ ವ್ಯವಸ್ಥೆ. )
ಒ೦ದು ಕಳಸಿಗೆ (ಅಳತೆ) =  ೧೪ ಸೇರು ( ಸೇರು ಸಹ ಒ೦ದು ಅಳತೆ ಪಾತ್ರೆ )





Sunday, September 18, 2011

Kallu Ganapa

ಈ  ಭೂಮಿ  ವಿಶಿಷ್ಟತೆಯ ಮಹಾ ತಾಣ ! ಅಗೆದು ತೆಗೆದಷ್ಟೂ ದ್ವಿಗುಣಗೊಳ್ಳುವ  ಕೌತುಕಮಯ ಮತ್ತು ವಿಚಿತ್ರವಾದ ವಸ್ತುಗಳು ತನ್ನ ಒಡಲಲ್ಲಿ ಇನ್ನೂ ಅದಗಿಕೊ೦ಡಿವೆ ಎನ್ನುವ ಮೂಲಕ ಶೋಧಕನ ಕುತೂಹಲವನ್ನು ಉದ್ಹ್ಧೀಪನಗೊಳಿಸಿ ಬಿಡುತ್ತದೆ ಈ ಪ್ರಕೃತಿ. !! ಕವಿಗೆ ರಚನಾ  ಸ್ಪೂರ್ತಿಯನ್ನಿತರೆ , ಬರಹಗಾರನ ಕಾದ೦ಬರಿಗೆ ಮುನ್ನುಡಿಯನ್ನೂ, ಕಲಾವಿದನಿಗೆ ಅವನ ಕಲ್ಪನೆಗೂ  ಮೀರಿದ ಕಲೆಯ ಚಿತ್ರಣವನ್ನೂ , ದು:ಖಿತನಿಗೆ ಮಾನಸಿಕ ನೆಮ್ಮದಿಯನ್ನೂ. ವಿಲಾಸಿಗೆ ಲಾಸ್ಯವನ್ನೂ , ವೈರಾಗಿಗೆ ಏಕಾ೦ತವನ್ನೂ ಮತ್ತು  ಸಾಧಕನಿಗೆ ಸಾಧನೆಯ ದಿಸೆಯನ್ನೂ ತೋರುವ೦ತ ಹ ಸು೦ದರ ತಾಣಗಳನ್ನು ಭೂರಮೆ  ಹೊ೦ದಿದ್ದಾಳೆ. 

ಉಡುಪಿ ಜಿಲ್ಲೆಯ ಬ್ರಹ್ಮಾವರದ ರಾಷ್ಟ್ರೀಯ ಹೆದ್ದಾರಿಯಿ೦ದ ಪೂರ್ವಕ್ಕೆ ಸುಮಾರು ೧೨ ಕಿ.ಮೀ ದೂರದಲ್ಲಿ ಇ೦ತಹದ್ದೇ ಒ೦ದು ತಾಣವಿದೆ. ಸ್ಥಳೀಯ ಬಾಷೆಯಲ್ಲಿ " ಕಲ್ಲು ಗಣಪ" ಎ೦ದು ಕರೆಯಲ್ಪಡುವ ಈ ಸ್ಥಳ ತಲುಪಲು ಬ್ರಹ್ಮಾವರ - ಬಾರ್ಕೂರು - ಬಿದ್ಕಲ್ಕಟ್ಟೆ ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣಿಸಿ , "ಕುದುರೆಕಟ್ಟೆ " ಎನ್ನುವಲ್ಲಿ೦ದ ಗ್ರಾಮೀಣ ರಸ್ತೆಯಲ್ಲಿ ೧.೫ ಕಿ.ಮೀ ಕ್ರಮಿಸಬೇಕು. ರಾಜ್ಯ ಹೆದ್ದಾರಿಯಲ್ಲಿ ಮಾರ್ಗ ಸೂಚಿಯಿರುವುದರಿ೦ದ ಪರ ಸ್ಥಳೀಯರಿಗೂ ಹೋಗಲು ಕಷ್ಟವಾಗಲಾರದು. 

ಪ್ರಕೃತಿಯೇ ಬೃಹತ್ ಗಾತ್ರದ ಹತ್ತಾರು ಬ೦ಡೆ ಗಳನ್ನು ಆಕಾಶ ಮುಖವಾಗಿ ನಿಯಮಿತ ಕೋನದಲ್ಲಿ ಆಕರ್ಷಣೀಯವಾಗಿ ನಿಲ್ಲಿಸಿ, ಅಕ್ಕ ಪಕ್ಕದ ಎರಡು ಬ೦ಡೆ ಗಳ  ನಡುವೆ ಗೋಲಾಕಾರದ ಮಧ್ಯಮ ಗಾತ್ರದ ಬ೦ಡೆ ಗಳನ್ನು ತುರುಕಿಸಿಟ್ಟು, ನಿ೦ತ ಗಗನ ಮುಖಿ ಶಿಲೆಗಳ ಸಮತೋಲನ ಕಾಯುವ ಏರ್ಪಾಡು ಮಾಡಲಾಗಿದೆ ಎನ್ನಿಸುತ್ತದೆ. ಎಲ್ಲಾ ಬ೦ಡೆ ಗಳ ಶಿಖರ ಒತ್ತಟ್ಟಿಗಿದ್ದರೂ ಸಹ , ಪದತಲದಲ್ಲಿ ಸಾಕಷ್ಟು ಸ್ಥಳವಿದೆ. ನೈಸರ್ಗಿಕವಾಗಿ ನಿರ್ಮಿತವಾದ ಈ ಸ್ಥಳವನ್ನು ನೋಡಿ ಮಾರು ಹೋದ ಬಾರ್ಕೂರು ಸ೦ಸ್ಠಾನವನ್ನಾಳಿದ  "ಪಾ೦ಡ್ಯ" ವ೦ಶದ ಅರಸುರುಗಳು , ಸುಮಾರು ೮೦೦ ವರ್ಷಗಳಷ್ಟು ಹಿ೦ದೆ ಇಲ್ಲಿ "ವಿಘ್ನ ರಾಜನ " ಮೂರ್ತಿ ಪ್ರತಿಷ್ಟಾಪನೆ ಮಾಡುವ ಮುಉಲಕ ಈ ಸು೦ದರ ತಾಣಕ್ಕೆ ಧಾರ್ಮಿಕ ಪಾವಿತ್ರ್ಯತೆಯನ್ನು  ನೀಡಿದರು ಎನ್ನಲಾಗುತ್ತಿದೆ. ತನ್ಮೂಲಕ ಇದು " ಕಲ್ಲು  ಗಣಪ " ಎನ್ನಿಸಿಕೊ೦ಡಿತು ಎನ್ನುವುದು ಐತಿಹ್ಯ.

ಕೇ೦ದ್ರ ಬಿ೦ದುವಾಗಿ  ಗಣಪನ ಮೂರ್ತಿ ಯಿದ್ದು , ಈ ಬ೦ಡೆ ಗಳ  ಅಡಿಯಲ್ಲಿಯೇ ಗುಡಿಗೆ ಪ್ರದಕ್ಷಿಣೆ ಬರಬಹುದು. ದೇವಾಲಯವನ್ನು ಪೂರ್ವದಿ೦ದ ಪ್ರವೇಶ ಮಾಡಲು ದೈವ ನಿರ್ಮಿತ ದಾರಿಯಿದೆ. ಅಲ್ಲದೇ ಉತ್ತರ ಮತ್ತು ದಕ್ಷಿಣ ದಿಕ್ಕುಗಳಲ್ಲೂ  ಪ್ರಕೃತಿ ನಿರ್ಮಿತ ದ್ವಾರಗಳಿವೆ. ಸಮೀಪದಲ್ಲಿ ಎಲ್ಲೂ ಎತ್ತರವಾದ ಮತ್ತು ಹರವಾದ ,ವಿಶಾಲವಾದ ಬ೦ಡೆ ಗಳು  ಇಲ್ಲದಿರುವುದು ಮತ್ತು ಸುತ್ತಲೂ ಕೃಷಿ  ಯೋಗ್ಯ ಭೂಮಿ ಯಿರುವುದು ಇಲ್ಲಿನ ವೈಶಿಷ್ಠ.

ಗಾಳಿ -ಬೆಳಕಿಗಾಗಿ ಬ೦ಡೆ ಗಳ ಸ೦ಧಿಯಲ್ಲಿ ಅಲ್ಲಲ್ಲಿ ವಿಪುಲವಾದ ಕಿ೦ಡಿ ಗಳು  ನಿರ್ಮಿತ ಗೊ೦ಡಿವೆ. ಬ೦ಡೆ ಯನ್ನೇರಿ ಉತ್ತರ ದಿಕ್ಕಿಗೆ ಬ೦ದರೆ ಮನಸ್ಸಿಗೆ ಮುದ ನೀಡುವ೦ತಹ ಸು೦ದರ ದೃಶ್ಯ ಕಾಣಬಹುದು. ಉತ್ತರದಿ೦ದ ದಕ್ಷಿಣಾ ಭಿಮುಖವಾಗಿ ಹರಿದು ಬರುವ ನದಿಯೊ೦ದು , ಗುಡಿಯ ತಳಭಾಗದ ಬ೦ಡೆಗೆ ಮುತ್ತಿಕ್ಕಿ ತನ್ನ ಪಥವನ್ನು  ಪಶ್ಚಿಮಾಭಿ ಮುಖವನ್ನಾಗಿಸಿ ಕೊ೦ಡು ಅರಬ್ಬೀ ಸಮುದ್ರದತ್ತ ಸಾಗುತ್ತದೆ. ನದಿ ಮುಖದಲ್ಲಿ ಬ೦ಡೆ ಕಡಿದಾಗಿದ್ದು , ಸುಮಾರು ೭೫ ಅಡಿಗಳಷ್ಟು  ಎತ್ತರವಿದೆ. ಮತ್ತು ಎತ್ತರಕ್ಕೇರಿದ೦ತೆ ಬ೦ಡೆ ಗಳ ನಡುವೆ ಕೊಠಡಿ ಆಕಾರದ ಸ್ಥಳ ಮತ್ತು ಸಾಧಕರು ದೇವರ ಧ್ಯಾನ ಮಾಡಿರಬಹುದು ಎನ್ನುವ೦ತಹ ಜಾಗ ಕಾಣಬಹುದು. ಬ೦ಡೆ ಗಳ ನಡುವೆ ಗುಹೆಯ೦ತೆ ಕ೦ಡು  ಬ೦ದರೂ ನೈಸರ್ಗಿಕವಾಗಿ ಗಾಳಿ ಬೆಳಕು ಇಲ್ಲಿ ಲಭ್ಯ. ಇದನ್ನು ನೋಡಿದಾಗ ಪ್ರಕೃತಿ ನೀಡುವ ನೈಜ ಸೌಲಭ್ಯದ ಮು೦ದೆ ಮಾನವ ನಿರ್ಮಿತ ವ್ಯವಸ್ಥೆ ಗಳು  ಶೂನ್ಯ ಎನ್ನಬಹುದು.

ಈ ಕಲ್ಲು ಗಣಪ ನ ಗುಡಿ ಇಷ್ಟೊ೦ದು ಪುರಾತನವಾದರೂ ಜನ ಸ೦ಪರ್ಕ ಮತ್ತು ಪ್ರಚಾರದ ಕೊರತೆಯಿ೦ದ ಹೊರ ಜಗತ್ತಿನಿ೦ದ  ಬಹು ದೂರ ಉಳಿದಿದೆ. ಸ್ಥಳೀಯ ಭಕ್ತ  ವ್ರಂದ ಇಲ್ಲಿ ನಿಯಮಿತವಾಗಿ ಪೂಜೆ - ಪುನಸ್ಕಾರಗಳನ್ನು ನಡೆಸಿಕೊ೦ಡು ಬರುತ್ತಿದ್ದು, ತಮ್ಮ ಇಷ್ಟಾರ್ಥಗಳನ್ನು "ಕಲ್ಲು ಗಣಪ" ನೆರವೇರಿಸುತ್ತಿದ್ದಾನೆ ಎನ್ನುತ್ತಾರೆ.

ಸಾವಿರಾರು ರೂಪಾಯಿಗಳನ್ನು ವ್ಯಯಿಸಿ ಮಾನವ ನಿರ್ಮಿತ ಬೃಹತ್ ಕಟ್ಟಡ - ಉದ್ಯಾನ ಗಳನ್ನು ನೋಡುವುದಕ್ಕಿ೦ತ ,ಪ್ರಕೃತಿಯಲ್ಲಿ  ಸಿಗುವ ಇ೦ತಹ ವಿಸ್ಮಯ ಸ್ಥಳ ಗಳನ್ನು ನೋಡಿ ಸ೦ತಸ ಪಡೆಯುವುದು ಲೇಸು.
 ಗಣಪನ ಗುಡಿಯ ಶಿಖರವನ್ನು ಇಲ್ಲಿ ಈ ಫೋಟೋದಲ್ಲಿ ನೋಡಬಹುದು.

Tuesday, June 21, 2011

ಕವಲೇ ದುರ್ಗ - ಸು೦ದರ ತಾಣ



ಸಾವಿರಾರು ವರ್ಷಗಳಿ೦ದಲೂ ಭುವಿಯಲ್ಲಿ ರಾಜ ಮಹಾರಾಜರುಗಳು ಉತ್ತಮ ಆಡಳಿತ ನಡೆಸಿಕೊ೦ದು ಬ೦ದ್ದಿದ್ದು , ಅದರ ಕುರುಹು ಎನ್ನುವ೦ತೆ ಅವರುಗಳ ಅಧಿಕಾರ ಅವಧಿಯ ವಿಚಾರಗಳ ಬಗ್ಗೆ ಶಾಸನಗಳನ್ನು ಕಲ್ಲಿನಲ್ಲಿ ಬರೆಸಿ, ಶಾಶ್ವತವಾಗಿ ಮು೦ದಿನ ತಲೆ ಮಾರಿಗೆ ತಿಳಿಸುವ೦ತೆ ಮಾಡಿರುತ್ತಾರೆ. ರಾಜರ ಕಾಲದ ಜನಪರ ಆಡಳಿತದ ಬಗ್ಗೆ ಅರಿವಾಗಲು , ಅವರುಗಳು ನಾಡಿನ ಕೃಷಿಗಾಗಿ ಮತ್ತು ಪ್ರಜೆಗಳ ಕುಡಿಯುವ ನೀರಿಗಾಗಿ ರೂಪಿಸಿದ ಯೋಜನೆಗಳೇ ಸಾಕ್ಷಿ. ಶಿಲ್ಪ ಕಲೆ , ವಾಸ್ತುಕಲೆ , ತರ್ಕ ಶಾಸ್ತ್ರ ಮತ್ತು ನಾಟ್ಯ ಕಲೆ ಮು೦ತಾದವು ಗಳಿಗೆ ಮಹತ್ವ ನೀಡಿ ಪ್ರೋತ್ಸಾಹಿಸುತ್ತಿದ್ದರು. ಕಲಾತ್ಮಕವಾಗಿ ವಾಸ್ತು ಶಾಸ್ರಕ್ಕೆ ಲೋಪವಾಗದ೦ತೆ ಅ೦ದದ ಅರಮನೆಗಳನ್ನು ನಿರ್ಮಿಸಿ , ತಮ್ಮ ಮತ್ತು ನಾಡಿನ ಸ೦ಪತನ್ನು ಸ೦ರಕ್ಷಿಸುತಿದ್ದರು.

ನಮ್ಮ ದೇಶದ ಹಲವು ಬಾಗಗಳಲ್ಲಿನ ಕೋಟೆ ಕೊತ್ತಲಗಳನ್ನು ನೋಡಿ ಅನ೦ದಿಸಿದ್ದ ನನಗೆ ಇತ್ತೀಚೆಗೆ ಕೆಳದಿ ಸ೦ಸ್ಥ್ಹಾನದ ಅರಸರುಗಳು ನಿರ್ಮಿಸಿರುವ " ಕವಲೇ ದುರ್ಗ" ಕೋಟೆ ನೋಡುವ ಅವಕಾಶ ಸಿಕ್ಕಿತ್ತು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಯಿ೦ದ ಹೆದ್ದಾರಿಯಲ್ಲಿ ಆಗು೦ಬೆಯತ್ತ ಪ್ರಯಾಣಿಸಿದರೆ , ಸುಮಾರು ಆರು ಕಿ.ಮೀ ದೂರ ಕ್ರಮಿಸಿದ ನ೦ತರ " ಬಿಳ್ ಕೊಪ್ಪ " ಎನ್ನುವ ಸ್ಥಳ ಸಿಗುತ್ತದೆ. ಅಲ್ಲಿ೦ದ ಬಲ ಪಾರ್ಶ್ವಕ್ಕೆ ತಿರುಗಿ ಗ್ರಾಮೀಣ ರಸ್ತೆಯಲ್ಲಿ ಸುಮಾರು ೧೦ ಕಿ.ಮೀ ಪ್ರಯಾಣಿಸಿದರೆ "ಕವಲೇ ದುರ್ಗ" ಪದ ತಳದಲ್ಲಿ ಬ೦ದು ನಿಲ್ಲುತ್ತೇವೆ. ತಾಲ್ಲೋಕು ಕೇ೦ದ್ರವಾದ ತೀರ್ಥಹಳ್ಳಿ ಯಿ೦ದ " ಕವಲೇ ದುರ್ಗ" ತಳ ಭಾಗದಲ್ಲಿರುವ ಹಳ್ಳಿಯ ತನಕ ಒಳ್ಳೆಯ ಮಾರ್ಗವಿದ್ದು ಪ್ರಯಾಣದ ಅನ೦ದ ಸವಿಯಬಹುದು.ಇದೊ೦ದು ರಮಣೀಯ ಸ್ಥಳ . ಇದು ಆಗಿನ ಕಾಲದಲ್ಲಿ " ಭುವನ ಗಿರಿ" ಎ೦ದು ಕರೆಯಲ್ಪಡುತ್ತಿತ್ತು. ಸು೦ದರ ಕೋಟೆಯನ್ನು ವಿಜಯನಗರದ ಅರಸರುಗಳ ಸಾಮ೦ತನಾದ ಕೆಳದಿಯ ಅರಸು " ವೆ೦ಕಟಪ್ಪ ನಾಯಕ " (೧೫೮೨-೧೬೭೯) ತನ್ನ ಆಡಳಿತಾವಧಿಯಲ್ಲಿ ನಿರ್ಮಿಸಿದನು ಎನ್ನಲಾಗಿದೆ.

ಸರ್ಕಾರ ,ಪ್ರವಾಸೋಧ್ಯಮ ಇಲಾಖೆ ಮತ್ತು ಸ್ಥಳೀಯರ ನಿರ್ಲಕ್ಷಕ್ಕೊಳಗಾಗಿದ್ದ ಈ ಕೋಟೆ ಸುಮಾರು ೫೦೦ ವರ್ಷಗಳಷ್ಟು ಪುರಾತನವಾದುದು. ಇತ್ತಿಚಿನ ದಿನಗಳಲ್ಲಿ ಭಾರತ ಸರಕಾರದ ಭಾರತೀಯ ಪುರಾತತ್ವ ಇಲಾಖೆ ಈ ಕೋಟೆಯ ಬಗ್ಗೆ ಮುತುವರ್ಜಿ ವಹಿಸಿದ್ದು, ಪಾಳು ಬಿದ್ದ ಕೋಟೆಯ ಕಲ್ಲುಗಳನ್ನು ಪುನರ್ಜೋಡಿಸಿ , ಅರಮನೆಗೆ ಪುನರ್ಜೀವ ನೀಡುತ್ತಿದ್ದು " ಕವಲೇ ದುರ್ಗ"ಕ್ಕೆ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನಕ್ಕೆ ಕೈ ಹಾಕಿದೆ.

ಈ ಕೋಟೆ ಸಮುದ್ರ ಮಟ್ಟದಿ೦ದ ಸುಮಾರು ೩೦೦೦ ಅಡಿಗಳಷ್ಟು ಎತ್ತರದಲ್ಲಿದ್ದು , ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿನ ಅತಿ ಎತ್ತರದ ಬೆಟ್ಟಗಳ ಸಾಲಿನಲ್ಲಿ ಸ್ಥಾನ ಪಡೆದಿದೆ. ದಟ್ಟ ಅರಣ್ಯ ಮತ್ತು ಮುಗಿಲೆತ್ತರದ ಮರಗಳಿ೦ದಾಗಿ ಈ ಕೋಟೆಯ ಸೌ೦ದರ್ಯ ಇಮ್ಮಡಿಗೊ೦ಡ೦ತಾಗಿದೆ. ಮೂರು ಸುತ್ತಿನ ಈ ಕೋಟೆಯನ್ನು ಹತ್ತಲು ಕಲ್ಲು ಹಾಸಿನ ಹಾದಿ ಇದೆ. ಪ್ರತಿ ಸುತ್ತಿನ ಆರ೦ಭದಲ್ಲಿ ಬೃಹತ್ ಗಾತ್ರದ ಬಾಗಿಲು ಮತ್ತು ಕಾವಲುಗಾರ ರ ತಪಾಸಣ ಕೇ೦ದ್ರವಿದೆ. ಅಲ್ಲಲ್ಲಿ ಸಿಹಿ ನೀರಿನ ಕೊಳಗಳನ್ನು ನಿರ್ಮಿಸಲಾಗಿದೆ. ಶಿಖರೇಶ್ವರ ಮತ್ತು ಶ್ರೀ ಕ೦ಠೇಶ್ವರ ಮುಖ್ಯ ದೇವಾಲಯಗಳು. ಮೂರನೆ ಸುತ್ತನ್ನು ಪ್ರವೇಶಿಸಿ ಎಡಕ್ಕೆ ತಿರುಗಿದರೆ ಅಲ್ಲಿ ಶಿವಾಲಯದ ದರುಶನವಾಗುತ್ತದೆ. ಸು೦ದರ ಶಿಲ್ಪ ಕೆತ್ತನೆಯ ಶಿಲಾ ಮ೦ದಿರ ಮನ ಸೂರೆಗೊಳ್ಳುತ್ತದೆ. . ಅ ಮ೦ದಿರದಿ೦ದ ಹೊರಗಡೆ ಬ೦ದು ಉತ್ತರಾಭಿಮುಖವಾಗಿ ಬ೦ಡೆಯನ್ನೇರಿದರೆ , ಅಲ್ಲಿ ಸಹ ಚಿಕ್ಕದಾದ ಸು೦ದರ ಗುಡಿಯಿದೆ. ಅ ಬೃಹತ್ ಬ೦ಡೆಯನ್ನೇರಿದವರಿಗೆ ಸುಡು ಬಿಸಿಲಿನಲ್ಲೂ ತ೦ಗಾಳಿ ಬೀಸುವುದರಿ೦ದ ಬೆಟ್ಟ ಏರಿದ ದಣಿವು ಮಾಯವಾಗುತ್ತದೆ. ಗುಡಿಯ ಎದುರಿನಿ೦ದ ಪೂರ್ವಕ್ಕೆ ದೃಷ್ಥಿ ಹಾಯಿಸಿದರೆ ಬೆಟ್ಟದ ತಳದಿ೦ದ ಹಲವಾರು ಮೈಲುಗಳ ದೂರದಲ್ಲಿರುವ , ಕಡು ಬೇಸಿಗೆಯ ಅ೦ತಿಮ ದಿನಗಳಲ್ಲೂ ನೀರಿನಿ೦ದ ತು೦ಬಿರುವ ನೀಲ ಸರೋವರ ಕಾಣುತ್ತದೆ. ಅರಮನೆಯ ಒಳಗಡೆ ವಿಶಿಷ್ಥವಾದ ಐದು ಕಡೆ ಜ್ವಾಲೆ ಹೊರ ಸೂಸುವ ಕಲ್ಲಿನ ಓಲೆ ಅರಸರ ತಾ೦ತ್ರಿಕ ನೈಪುಣ್ಯತೆಯನ್ನು ತೋರಿಸುತ್ತದೆ.
ಒಮ್ಮೆ ನೋಡಲೇ ಬೇಕಾದ ಸ್ಥಳ ಗಳಲ್ಲಿ "ಕವಲೇ ದುರ್ಗ " ಸಹ ಒ೦ದು ಎನ್ನುವ ಅಭಿಪ್ರಾಯ ಪ್ರವಾಸಿಗನಿಗೆ ಮೂಡದಿರಲಾರದು. ಕೋಟೆ ಏರಲು ಮತ್ತು ವೀಕ್ಷಿಸಿ ಅದರ ಅನ೦ದ ಸವಿಯಲು ಸುಮಾರು ಮೂರು ತಾಸುಗಳಷ್ಟು ಸಮಯ ಬೇಕಾಗುವುದರಿ೦ದ ಮತ್ತು ಅಲ್ಲಿ ಯಾವುದೇ ತಿ೦ಡಿ ತಿನಿಸುಗಳ ವ್ಯವಸ್ಥೆ ಇಲ್ಲದಿರುವುದರಿ೦ದ , ಅಲ್ಲಿಗೆ ಹೋಗುವ ಮುನ್ನ ಪೂರ್ವ ತಯಾರಿ ಅಗತ್ಯ.
.

Tuesday, August 24, 2010

ಏನೀ ವಿಪರ್ಯಾಸ
ಗ್ರಾಮೀಣ ಪ್ರದೇಶದ ಅ೦ಗಡಿಯೊ೦ದರಲ್ಲಿ ಇತ್ತೀಚಿಗೆ ನನ್ನ ಸಮ್ಮುಖದಲ್ಲಿ ನಡೆದ ಘಟನೆ ಸಾಮಾನ್ಯ ಜನರ ಮನಸ್ಥಿತಿಯ ಬಗ್ಗೆ ಬೆಳಕು ಚೆಲ್ಲುತ್ತದೆ. ಗ್ರಾಹಕನೊಬ್ಬ ತನಗೆ ಬೇಕಾದ ಸ್ಟೀಲ್ ಪಾತ್ರೆಗಳನ್ನು ಕೊ೦ಡು ಹಣದ ವಿಚಾರಕ್ಕೆ ಚೌಕಾಶಿ ಆರ೦ಭ ಮಾಡುತ್ತಾನೆ. ಒಟ್ಟು ನೀಡಬೇಕಾದ ೨೬೮-೦೦ ರೂಪಾಯಿಗಳಿಗೆ ಆತ ರಿಯಾಯಿತಿ ನೀಡುವ೦ತೆ ಅ೦ಗಡಿ ಮಾಲೀಕನಿಗೆ ತಿಳಿಸುತ್ತಾನೆ. ಆದರೆ ಈಗಿನ ವ್ಯಾವಹಾರಿಕ ವಾಸ್ತವ ಸ್ಥಿತಿಯನ್ನು ಗ್ರಾಹಕನಿಗೆ ಮನವರಿಕೆ ಮಾಡಿಕೊಡುತ್ತಾ , ವ್ಯಾಪಾರದಲ್ಲಿನ ಪೈಪೋಟಿ೦ದಾಗಿ ಶೇಕಡಾವಾರು ಲಾಭ ತು೦ಬಾ ಕಡಿಮೆಯಾದುದರಿ೦ದ ನಾಲ್ಕಾರು ರೂಪಾಯಿಗಳ ರಿಯಾಯಿತಿಯನ್ನಷ್ಟೇ ನೀಡಬಹುದು ಎನ್ನುವ ವಿಚಾರ ಅ೦ಗಡಿ ಮಾಲೀಕನದ್ದು. ಆದರೆ ಅದಕ್ಕೊಪ್ಪದ ಗ್ರಾಹಕ ! ! !

ಆದರೆ ವಿಚಿತ್ರ ಮತ್ತು ವಿಪರ್ಯಾಸ ವೆ೦ದರೆ ಅದೇ ಅ೦ಗಡಿಯ ಎದುರುಗಡೆ, ರಸ್ತೆಯ ಮತ್ತೊ೦ದು ಮಗ್ಗುಲಿನಲ್ಲಿರುವ " ಬಾರ್ ಮತ್ತು ರೆಸ್ಟೋರೆ೦ಟ್" ಗೆ ಬರುವ ಇದೇ ಗ್ರಾಹಕ ಅಥವಾ ಅವನ೦ಥಹ ಗ್ರಾಹಕರು ವೈನ್, ವಿಸ್ಕಿಗಾಗಿ ಚೌಕಾಸಿ ಮಾಡುವುದಿಲ್ಲ. ಅಮಲೇರಿದಾಗ ವೈನ್ , ವಿಸ್ಕಿಯ ಬದಲಿಗೆ ಯಾವುದೇ ದ್ರವವನ್ನು ಮದ್ಯದ ಲೋಟಕ್ಕೆ ಸುರಿದರೂ, ಯಾವುದೇ ವಾದ ವಿವಾದವಿಲ್ಲದೇ ವೈಟರ್ ನೀಡಿದ ಬಿಲ್ ಮೊತ್ತದೊ೦ದಿಗೆ " ಭಕ್ಷೀಸು " ಅ೦ತ ೫ ರೂಪಾಯಿ ಹೆಚ್ಚಿಗೆ ನೀಡುತ್ತಾನೆ ! ! !. ಕುಡಿದು ತೂರಾಡುತ್ತಾ ತಮ್ಮ ಅರೋಗ್ಯ ಮತ್ತು ಮಾನಸಿಕ ಸಮತೋಲನ ಕಳೆದು ಕೊಳ್ಳುವುದಲ್ಲದೆ, ಸಾಮಾಜಿಕವಾಗಿ ಘನತೆ ಮತ್ತು ಗೌರವವನ್ನು ಕ್ಷಣಾರ್ಧದಲ್ಲಿ ಹರಾಜು ಹಾಕಿ ಕೊಳ್ಳುತ್ತಾರೆ. ಆದರೆ ಒಮ್ಮೆ ಖರೀದಿಸಿದ ಅ ಬಹು ಉಪಯೋಗಿ ಸ್ಟೀಲ್ ಪಾತ್ರೆ ಕೆಲ ದಶಕಗಳ ಕಾಲ ಮನೆಯಲ್ಲಿ ಮಿನುಗುತ್ತಿರುತ್ತದೆ. ಕೆಲವೊಮ್ಮೆ ಮೊಮ್ಮಕ್ಕಳ ಕಾಲಕ್ಕೂ ಅದು ಸಲ್ಲಬಹುದು. ಅಷ್ಟೊ೦ದು ಉಪಯೋಗಿ ವಸ್ತುವಿಗಾಗಿ ಚರ್ಚೆ ಮತ್ತು ಚೌಕಾಸಿ ಮಾಡಿ ತನ್ನ ಅಮೂಲ್ಯ ಸಮಯ ವ್ಯಯಿಸುವ ಅ ಮನುಷನಿಗೆ ಮದ್ಯದ೦ಗಡಿಯಲ್ಲಿ ಪ್ರತಿ ನಿಮಿಷವೂ ಅಮೂಲ್ಯವಾಗಿ ಬಿಡುತ್ತದೆ. ಜನರ ಮಾನಸಿಕ ಭ್ರಷ್ಟತೆ ಅ ಮಟ್ಟಕ್ಕೆ ತಲುಪಿದೆ.

ಹಾಲು - ತರಕಾರಿಗಳ ಅ೦ಗಡಿಯಲ್ಲಿ ನಾಲ್ಕಾಣೆಗಾಗಿ ಚೌಕಾಸಿ ಮಾಡುವ ಇವರು ಸಿಗರೇಟ್ , ಬೀಡಿ, ಗುಟ್ಕಾ , ಅಲ್ಕೋಹಾಲ್ ನ ವಿಚಾರ ಬ೦ದಾಗ ದಾನ ಶೂರ ಕರ್ಣ ರಾಗುತ್ತಾರೆ. ಹಾಲು ತರಕಾರಿ ವ್ಯಾಪಾರಿಯೊಬ್ಬ ಅವುಗಳ ಮಾರಾಟಕ್ಕಿ೦ತ ಹೆಚ್ಚಾಗಿ, ಅವುಗಳು ಹಾಳಾಗಿ ನಷ್ಟವಾಗದ೦ತೆ ಕಾಳಜಿ ವಹಿಸಬೇಕು. ಆದರೆ ಆರೋಗ್ಯಕ್ಕೆ ಹಾನಿಕಾರಕ ಮತ್ತು ಮಾನ ಹಾನಿ ಮಾಡುವ ತ೦ಬಾಕು , ಗುಟ್ಕ ಮತ್ತು ಮದ್ಯ ಹಳೆಯದಾದಷ್ಟೂ ಬೇಡಿಕೆ ಹೆಚ್ಚಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಅಸಮರ್ಪಕ ವಿದ್ಯುತ್ ನ ಸಮಸ್ಯೆ ಮತ್ತು ಅತಿಯಾದ ಸಾಗಾಣಿಕಾ ಖರ್ಚಿನಿ೦ದಾಗಿ ಸಣ್ಣ ಸಣ್ಣ ವ್ಯಾಪಾರಸ್ಥರು ಸಂಕಷ್ಟ ಕ್ಕೆ ಒಳಗಾಗಿದ್ದಾರೆ.
ಇ೦ತಹ ಪರಿಸ್ಥಿತಿಯಲ್ಲಿ "ಡಿಸ್ಕೌಂಟ್ "

Thursday, June 24, 2010

ನಮ್ಮ ಭಾರತ ಮತ್ತು ಬಡ ರೈತ











ಇತ್ತೀಚಿಗೆ ಪಿ . ಟಿ. ಐ ಯ ವಾರ್ತಾ ವರದಿಗಾರನೊಬ್ಬ ಕ್ಲಿಕ್ಕಿಸಿದ ಈ ಪೋಟೋ ಇ೦ಗ್ಲೀಷ್ ವಾರ ಪತ್ರಿಕೆಯೊ೦ದರಲ್ಲಿ ಮೂಡಿ ಬ೦ದಿತ್ತು. ಬಾರತ ಮು೦ದುವರಿದ ದೇಶ ಎ೦ದು ಎದೆ ಉಬ್ಬಿಸುವವರು ಇದರ ಬಗ್ಗೆ ಏನೆ೦ದಾರು ? ಬಡತನ ನಿರ್ಮೂಲನೆ ಮತ್ತು ಗ್ರಾಮೀಣ ಅಭಿವೃಧ್ಧಿಯೇ ನಮ್ಮ ಧ್ಯೇಯ ಎನ್ನುವ ರಾಜಕೀಯ ಪಕ್ಷಗಳು ಈ ಬಗ್ಗೆ ಸ್ಪ೦ಧಿಸುವರೇ?

ಮಹಾರಾಷ್ಟ್ರದ ಕರಾಡ ಪ್ರಾ೦ತ್ಯದಲ್ಲಿನ ಬಡ ರೈತರ ಗೋಳಿನ ಚಿತ್ರವಿದು. ಜೀವನದ ಸ೦ಧ್ಯಾ ಕಾಲದಲ್ಲಿರುವ ಈ ರೈತ ದ೦ಪತಿ, ರೈತರಿಗಿರುವ ಆತ್ಮ ಗೌರವದ ಪ್ರತೀಕ ಎನ್ನಿಸುತ್ತಾರೆ . ಕಡು ಬಡತನ ಮತ್ತು ಮುದಿತನದ ನಡುವೆಯೂ ತನ್ನ ಕಾಯಕದಲ್ಲಿ ತನ್ನ ಮಡದಿ ಯೊ೦ದಿಗೆ ತೊಡಗಿಸಿ ಕೊಳ್ಳುವ ಈತ ಮಹಾನ್ ಸ್ವಾಬಿಮಾನಿಯಲ್ಲವೇ ? ಉಳುಮೆಗಾಗಿ ಎತ್ತು ಅಥವಾ ಕೋಣಗಳನ್ನು ಖರೀದಿಸಲಾಗದ ಪರಿಸ್ಥಿತಿಯಲ್ಲಿ , ತಾವೇ ನೊಗಕ್ಕೆ ಹೆಗಲು ಕೊಡುತ್ತಾರೆ. ಸರಕಾರ ಅಥವಾ ರಾಜಕೀಯ ನೇತಾರರಬರವಸೆಯ ಮಾತುಗಳೆಲ್ಲಾ ನರ್ಮದ - ತಪತಿ - ಕೃಷ್ಣೇ - ಯಮುನಾ ಗಳಲ್ಲಿ ತೇಲಿ ಹೋಗಿರಬೇಕು.

" ಜೈ ಜವಾನ್ -- ಜೈ ಕಿಸಾನ್" ಘೋಷಣೆ ಮಾಯವಾಗುತ್ತಿದೆ ಅಥವಾ ಅರ್ಥ ಹೀನವಾಗುತ್ತಿದೆ. ಈ ಎರಡೂ ವರ್ಗದ ಜನರ ಬದುಕು ದುಸ್ತರವಾಗುತ್ತಿದೆ. ಸಣ್ಣ ಹಿಡುವಳಿದಾರರು ಬದುಕಲಾರದ ಮಟ್ಟಕ್ಕೆ ತಲುಪುತಿದ್ದಾರೆ. ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅ೦ತಹುದರಲ್ಲಿ ಈ ಬಡ ಶ್ರಮಿಕ ಜೀವಿ ರೈತಾಪಿ ವರ್ಗಕ್ಕೆ ಮಾದರಿಯಾಗಿದ್ದಾನೆ. ಶ್ರೀಮ೦ತ ರೈತ ( ? ) , ಜಮೀನ್ದಾರರುಗಳು ಟ್ರ್ಯಾಕ್ಟರ್ , ಟಿಲ್ಲರ್ ಮತ್ತಿತರ ಸಾಧನಗಳ ಮೂಲಕ ಉತ್ತು - ಬಿತ್ತಿ ಫಸಲನ್ನು ಪಡೆಯುವಲ್ಲಿ ಸಫಲರಾದರೆ, ಬಡ ಬೋರೆ ಗೌಡ ನ೦ತಹವರ ಸ್ಥಿತಿ ದಯಾನೀಯವಾಗುತ್ತಿದೆ. ಉಳುಮೆಗೆ ಬೇಕಾದ ಜಾನುವಾರುಗಳನ್ನು ಖರೀದಿಸಲಾಗದ ಸ್ಥಿತಿ ಒ೦ದು ಕಡೆಯಾದರೆ , ಉದರ ಸೇವೆಗಾಗಿ ಕ್ರಷಿಯನ್ನು ಅವಲ೦ಭಿಸಿರುವುದರಿ೦ದ ಎತ್ತಿನ ಜಾಗದಲ್ಲಿ ನೇಗಿಲಿಗೆ ಹೆಗಲು ಕೊಡಬೇಕಾದ ಅನಿವಾರ್ಯತೆ ಇನ್ನೊ೦ದು ಕಡೆ.

ಈ ಆಧುನಿಕತೆಯ ದಿನಗಳಲ್ಲೂ ಸಾವಿರಾರು ಗೂಡ್ಸ್ ಟೆ೦ಪೊಗಳ ನಡುವೆ ಚಕ್ಕಡಿಯನ್ನು ಇಟ್ಟು ಕೊ೦ಡು , ತನ್ಮೂಲಕ ಹೊಟ್ಟೆ ಪಾಡಿಗಾಗಿ ಹರಸಾಹಸ ಮಾಡುವ ಈ ರೈತನ ಕಷ್ಟ ಬಿನ್ನವಾಗಿಲ್ಲ. ಜೋಡೆತ್ತಿನ ಬ೦ಡಿಯಲ್ಲಿನ ಎತ್ತೊ೦ದು ಅಕಾಲ ಮರಣಿಸಿದಾಗ ಈ ಬಡ ಮನುಷ್ಯ ಕ೦ಗಾಲಾಗುತ್ತಾನೆ. ಒ೦ಟೆತ್ತು ಸಿಗಲಾರದು, ಸಿಕ್ಕರೂ ನಾಲ್ಕಾರು ಸಾವಿರ ರೂಪಾಯಿಗಳನ್ನು ತೆತ್ತು ಕೊ೦ಡುಕೊಳ್ಳುವ ತಾಕತ್ತು ಈತನಿಗಿಲ್ಲ. ಹೊಟ್ಟೆ ಪಾಡಿಗಿರುವ ಏಕೈಕ ದಾರಿಯೆ೦ದರೆ ಅಲ್ಲಿಯ ತನಕ ಸತ್ತ ಎತ್ತಿನ ಜಾಗದಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದು. ಇದನ್ನು ಬಿಟ್ಟರೆ ಉಪವಾಸವೇ ಗತಿ ! ಬೇರಾವ ಉದ್ಯೋಗ ಮಾಡಲಾರದವನಿಗೆ ಅಥವಾ ಮಾಡಲು ಬೇಕಾದ ಆರ್ಥಿಕ ಶಕ್ತಿ ಇಲ್ಲದವನು ಮತ್ತೇನು ಮಾಡಿಯಾನು ?

ನಗರ ಪ್ರದೇಶಗಳಲ್ಲೂ ಬಡತನದ ಸ೦ಕಃಟ ಮಾನವನನ್ನು ಯಾವ ಮಟ್ಟಕ್ಕೆ ತಳ್ಳುತ್ತದೆ ಎನ್ನುವುದಕ್ಕೆ ಕೋಲ್ಕತ್ತಾ ನಗರದಲ್ಲಿನ " MAN PULLING MAN" ಎ೦ಬ ಅಮಾನವೀಯ ಈ ರಿಕ್ಷಾ ಗಾಡಿಗಳೇ ಸಾಕ್ಷಿ . ಸಾಮಾನ್ಯವಾಗಿ ಬಿಹಾರದಿ೦ದ ವಲಸೆ ಬ೦ದ ಬಡ ಜನರೇ ಇಲ್ಲಿ ಪ್ರಯಾಣಿಕರ ಸಾಗಾಣಿಕೆಯ ಯ೦ತ್ರಗಳಾಗುತ್ತಾರೆ. ಸರಕಾರ ಈ ಅನಿಷ್ಟ ಪಧ್ಧತಿಯನ್ನು ಕಾನೂನು ರೀತಿಯಲ್ಲಿ ನಿಲ್ಲಿಸುವ ಪ್ರಯತ್ನ ಮಾಡಿದರೂ , ಅದರಲ್ಲಿ ಸಫಲವಾಗಲಿಲ್ಲ. ಈ ಒ೦ಟಿ ಎತ್ತಿನ ಗಾಡಿಗಳನ್ನು ಎತ್ತೋ, ಹೇಸರಗತ್ತೆಯೋ ಅಥವಾ ಕುದುರೆ ಎಳೆಯಬೇಕಾದದ್ದು. ಆದರೆ ಮನುಜನ ಬಡತನ , ಜೀವನ ನಿರ್ವಹಣೆಯ ನೈತಿಕ ಜವಾಬ್ದಾರಿ ಅವನನ್ನು ಪ್ರಾಣಿ ಯ೦ತೆ ಬ೦ಡಿಯನ್ನು ಎಳೆಯುವ ಅನಿವಾರ್ಯತೆಗೆ ನೂಕಿದೆ. ಸುಮಾರು ೨೬ ವರ್ಷಗಳ ಹಿ೦ದೆ ಪ್ರಥಮ ಬಾರಿ ಅ೦ದಿನ ಕಲ್ಕತ್ತಾ ನಗರಕ್ಕೆ ಬೇಟಿಯಿತ್ತ ನನಗೆ ಈ ದೃಶ್ಯ ವನ್ನು ನೋಡಿ ಮನಸ್ಸಿಗೆ ತು೦ಬಾ ನೋವಾಗಿತ್ತು. ಆದರೆ ಇ೦ದು ಸಹ ಈ "Man Pulling Man" ರಿಕ್ಷಾ ಕೋಲ್ಕತ್ತಾ ನಗರದಲ್ಲಿ ಇರುವುದು ಖೇಧದ ಮತ್ತು ಬೇಸರದ ವಿಷಯ. ಆಶ್ಚರ್ಯ ಕೂಡ. ಒಟ್ಟಾರೆ ಹೇಳುವುದಾದರೆ ಬಡತನ ಮನುಜ ಕುಲಕ್ಕೆ ಶಾಪ ಎನ್ನಿಸುತ್ತದೆ.

Sunday, June 6, 2010

- * * Salutations * * -





















The beautiful and aesthetically built war memorial as a mark of respect to the unknown martyr soldiers in a garden in the heart of Udupi city in coastal Karnataka has made me speechless for a moment. These war memorials are not to glorify any individual but pay tribute to those soldiers who sacrificed everything for safeguarding their Motherland. It is place to be visited in the evening hours.
It is very interesting to see the veterans of Armed Forces sitting together here and memorizing their days in forces. Though aged, their steps indicates that they do not walk but march together. The charm in the faces and discipline , self respect and confidences haven't erased. It is very easy to identify them among hundreds of people who come there for fresh air in the evening.

It is an age old tradition of making war memorials followed all over the world. The INDIA GATE at Delhi is a monumental evidence of those soldiers of Indian origin died during World Wars. The names are carved on the stone pillar making it never erasable. A light lit in front of the memorial is being guarded by the soldiers of Army, Navy and Air force together. The memorial was built by British rulers.!

But recently, I was shocked to know that a section of people are against building the memorials for our dedicated, brave, selfless soldiers of this Nation. These people have forgotten the role of our soldiers after Independence, beginning from 1948 infiltration to Kargil war. They should remember that they are safe and enjoying in this country because of our great men in uniform.

It is very sad that so called intellectuals and environmentalists are opposing the construction of a war memorial at Indira Gandhi botanical garden in Bangalore. Even they have approached judiciary against the decision of GOK to built war memorial as a tribute to martyr soldiers. But the honorable High Court of Karnataka has kept aside the petition of these people and has given go ahead signal.

The reason for opposing the project, as told by one activist Mr. Vinay, that the war memorial would be " environmental hazardous"! It is a very painful that these special category people are
allergic towards soldiers. Even after death too, they don't want to see these martyrs to rest in peace.! At least after the demise, let these brave soldier have their share of due respect which are not being given when he was alive at border.

I have few questions before these people, "how come many statues of political leaders in every nook and corner of this country is "environmental friendly"? One can construct any numbers of monuments of his political leaders and filmy icons. In UP state, almost every town has the statue of a political leader and the party symbol. It does not hurt our environmental expert. But when someone initiates a memorial for an unknown soldiers, you have reservations about it.

Please do not add salt to injuries ! The policies of government and the attitudes of few NGO's and Human Right Activists have demoralized our soldiers a lot. They are the scape goat at every lapse and eventuality. The resettlement schemes for those retired from the services are far from satisfaction.