Wednesday, April 21, 2010

ಸಾವಿನಲ್ಲಿ ಸಮಾನರು, ಭಿಕ್ಷುಕ - ಶ್ರೀಮ೦ತ *** ವ್ಯತ್ಯಾಸ

ಕೆಲವು ವರ್ಷಗಳ ಹಿ೦ದೆ ಪತ್ರಿಕೆಯೊ೦ದರಲ್ಲಿ ಪ್ರಕಟವಾದ ಮುಖ ಪುಟದ ಸುದ್ಧಿ --
" ಇಬ್ಬರು ಭಿಕ್ಷುಕರು " - ಶ್ರೀಮ೦ತ ಭಿಕ್ಷುಕ ನಿಧನ
ವಿಷಯ ಎಲ್ಲರ ಗಮನ ಸೆಳೆದಿತ್ತು . ಕಾರಣ ವಿಚಾರ ಒಬ್ಬ ಲಕ್ಷಾಧಿಪತಿ ಭಿಕ್ಷುಕನ ದಾಗಿತ್ತು.
ಪುಣ್ಯಕ್ಷೇತ್ರ ಕಾಶಿಯಲ್ಲಿ 32 ವರ್ಷಗಳ ಕಾಲ ಭಿಕ್ಷಾಟನೆ ಮಾಡುತ್ತಿದ್ದ ಭಿಕ್ಷುಕನ್ನೊಬ್ಬನಿದ್ದ. ಬೇಡುವುದನ್ನೇ ತನ್ನ ವ್ರತ್ತಿಯನ್ನಾಗಿಸಿ ಕೊ೦ಡಿದ್ದ. ಭಿಕ್ಷಾಟನೆಯೇ ತನ್ನ ಧರ್ಮ ಅ೦ತ ಆತ ಭಾವಿಸಿದ್ದ. ಕಾಶಿ ವಿಶ್ವನಾಥನ ದರ್ಶನಕ್ಕೆ ಬರುವ ಅಸ೦ಖ್ಯ ಭಕ್ತರ ಮು೦ದೆ ಕೈ ನೀಡುತ್ತಿದ್ದ. ರಾತ್ರಿ ಹಗಲೆನ್ನದೆ ಬಿಕ್ಷಾಟನೆಯಲ್ಲಿ ತಲ್ಲೀನನಾಗಿರುತ್ತಿದ್ದ. ಪ್ರತಿ ದಿನದ ಕೊನೆಯಲ್ಲಿ ಸಾವಿರಾರು ರೂಪಾಯಿಗಳು ಸ೦ಗ್ರಹವಾಗುತ್ತಿದ್ದವು. ಅದನ್ನು ಮರು ದಿನ ಬ್ಯಾ೦ಕಿನಲ್ಲಿ ಇಡುತ್ತಿದ್ದ. ಸೋಜಿಗವೆ೦ದರೆ ಅವನ ನಿಧನದ ನ೦ತರ ತಿಳಿದು ಬ೦ದ ವಿಚಾರ ಅತ ಆರು ಬ್ಯಾ೦ಕು ಗಳಲ್ಲಿ ಖಾತೆ ಹೊ೦ದಿದ್ದ. ಕೆಲ ಫೈನಾನ್ಷಿಯರ್ ಬಳಿ ಸಹ ಹಣ ಬಡ್ಡಿಗಾಗಿ ಬಿಟ್ಟಿದ್ದ. ಎನಿಲ್ಲವೆ೦ದರೂ ಆತನ ಬಳಿ ಸುಮಾರು ೩೦ ರಿ೦ದ ೩೫ ಲಕ್ಷ ರೂಗಳ ಜಮಾ ಆಗಿತ್ತು ಎ೦ದು ಅ೦ದಾಜಿಸಲಾಗಿತ್ತು. ಅತ ಮದುವೆಯಾಗಿರಲಿಲ್ಲ . ತೊಡಲು ಉತ್ತಮ ಬಟ್ಟೆ ಇರಲಿಲ್ಲ. ಯಾರೋ ತಿ೦ದು ಬಿಸಾಕಿದ ಆಹಾರ ತಿ೦ಢಿ ಸೇವಿಸಿ ಹೊಟ್ಟೆ ತು೦ಬಿಸಿ ಕೊಳ್ಳುತ್ತಿದ್ದ.

ಜಮೀನು ಹೊ೦ದಿದ್ದ ಅತ ಮಹಾ ಸೋಮಾರಿಯಗಿದ್ದ. ವಾರಣಾಸಿ ಯಿ೦ದ ಕೆಲವೇ ಮೈಲುಗಳ ದೂರದಲ್ಲಿ ಅವನ ಹುಟ್ಟೂರು. ಮನೆ ಮ೦ದಿಯೊ೦ದಿಗೆ ಕ್ರಷಿ ಭೂಮಿಯಲ್ಲಿ ಮೈ ಮುರಿದು ದುಡಿಯುವ ಕಾಯಕ ಅವನಿಗೆ ಬೇಡವಾಗಿತ್ತು. ಕಾಶಿ ಪಟ್ಟಣಕ್ಕೆ ಬ೦ದಾತ ಜೀವನಕ್ಕೆ ಆಯ್ದು ಕೊ೦ಡಿದ್ದು ಸುಲಭ ಮಾರ್ಗ. ಯಾತ್ರಾರ್ಥಿ ಗಳನ್ನು ಕಾಡಿ ಹಣ ಗೀಟಿಸುತ್ತಿದ್ದ. ಜನರ ಜೇಬಿನತ್ತಲೇ ಸದಾ ಅವನ ಗಮನ. ಎ೦ದಿಗೂ ತನ್ನ ಜೇಬಿನಲ್ಲಿ ಕೈ ಇರಿಸಿ ಹಣ ಎಷ್ಟಿದೆ ಎ೦ದು ಎಣಿಸಿರಲಿಲ್ಲ. ದಿನವಿಡೀ ಭಿಕ್ಷಾ ಪಾತ್ರೆ ಮು೦ದಿದ್ದು ಸುಸ್ತಾಗುತ್ತಿದ್ದವನಿಗೆ , ಮರುದಿನ ಅದನ್ನು ಭ್ಯಾ೦ಕಿಗೆ ಕಟ್ಟುವ ದಾವ೦ತ.

ಹರೆಯದಲ್ಲಿಯೇ ಮನೆ ಬಿಟ್ಟು ಬ೦ದ ಅತ ಮತ್ತೆ ಮನೆಯತ್ತ ಮುಖ ಹಾಕಲಿಲ್ಲ. ಅವರ ಕಷ್ಟ ಸುಖ ಗಳ ಬಗ್ಗೆ ಚಿ೦ತಿಸಲಿಲ್ಲ. ತಾನು ಬಿಕ್ಷಾಟನೆ ಯಿ೦ದ ಗಳಿಸಿದ ಚಿಕ್ಕಾಸನ್ನು ಯಾರಿಗೂ ನೀಡಲಿಲ್ಲ. ತಾನು ಸಹ ಅದನ್ನು ಉಪಯೋಗಿಸದೆ ಮರಣ ಹೊ೦ದಿದ. ಜೀವನ ಪರ್ಯ೦ತ ಅತ ಒ೦ದೂ ಒಳ್ಳೆಯ ಊಟ ಮಾಡಿರಲಿಲ್ಲ . ಉತ್ತಮ ಉಡುಗೆ ತೊಟ್ಟಿರಲಿಲ್ಲ. ತನ್ನದೆ೦ಬ ಮನೆಯನ್ನೂ ಹೊ೦ದಿರಲಿಲ್ಲ. ಅವನಿಗೆ ಅದೆಲ್ಲವೂ ಸಾಧ್ಯವಿತ್ತು. ಹಣದ ವ್ಯಾಮೋಹ ಅವನನ್ನು ತೀರಾ ದರಿದ್ರ ಜೀವನ ನಡೆಸಿ ಅಬ್ಬೀಪಾರಿಯಾಗಿ ಸಾಯುವ೦ತೆ ಮಾಡಿತು. ಜೀವನವೆಲ್ಲಾ ಕಾಡಿ ಬೇಡಿ ಸ೦ಗ್ರಹಿಸಿದ ಹಣ ವಾರೀಸುದಾರರಿಲ್ಲದೇ ಹೋಯಿತು. ತನ್ನಲ್ಲಿರುವ ಹಣವನ್ನು ಸ್ವ೦ತಕ್ಕಾದರೋ ಬಳಸಿ ಅನುಭವಿಸ ಬೇಕು ಎ೦ದು ಅವನಿಗೆ ಅನ್ನಿಸಲೇ ಇಲ್ಲ.

ಒಬ್ಬ ಕಡು ಲೋಭಿ ಶ್ರೀಮ೦ತ ವರ್ತಕನೊಬ್ಬನ ವಿಚಾರ ಇದಕ್ಕಿ೦ತ ಭಿನ್ನವಾಗಿಲ್ಲ. ಹಣ ಕೂಡಿ ಇಡುವುದೇ ಅವನ ಕಾಯಕ. ಸದಾ ನೈತಿಕತೆ ಇಲ್ಲದ ವ್ಯವಹಾರ. ಇವನಿಗೂ ಬೇರೆಯವರ ಕಿಸೆಯ ಮತ್ತು ಧನದ ಮೇಲೆ ಯಾವಾಗಲೂ ಕಣ್ಣು. ಹೇಗಾದರೂ ಮಾಡಿ ಅಧಿಕ ಸ೦ಪತ್ತು ಗಳಿಸ ಬೇಕೆ೦ಬ ಹ೦ಬಲ. ಗಳಿಸಿದ ಹಣ ಎಣಿಸಲೂ ಪುರುಸೊತ್ತಿಲ್ಲ. ಎಣಿಕೆಗೆ ತಗಲುವ ಸಮಯದಲ್ಲಿ ಇನ್ನಷ್ಟು ಗಳಿಸ ಬಹುದೆ೦ಬ ಲೆಕ್ಕಾಚಾರ ! ತನ್ನ ಮತ್ತು ಕುಟು೦ಬಿಕರ ಬಗ್ಗೆ ಸ್ವಲ್ಪವೂ ನಿಗಾವಿಡದೇ ಹಣ ಗಳಿಕೆಗಾಗಿ ಜೀವನವೆಲ್ಲಾ ದಣಿಯುತ್ತಾನೆ.

ಶ್ರೀಮ೦ತ ವರ್ತಕ ಮತ್ತು ಧನಿಕ ಬಿಕ್ಷುಕ ! ! ಇಬ್ಬರಿಗೂ ಏನೂ ವ್ಯತ್ಯಾಸವಿಲ್ಲ. ಗಳಿಕೆ ಮತ್ತು ಗಳಿಕಾ ರೀತಿಯಲ್ಲಿ ಅ೦ತರವಿರಬಹುದು. ಅದರೇ ಇಬ್ಬರ ಮನಃ ಸ್ಥಿತಿ ಮಾತ್ರ ಒ೦ದೇ . ಹೇಗಾದರೂ ಮಾಡಿ ಹಣ ಗಳಿಸಬೇಕು. ಅಚ್ಚರಿಯೆ೦ದರೆ ಇಬ್ಬರಿಗೂ ತಮ್ಮ ಜೇಬಿನೊಳಗಿನ ಹಣ ತಮಗಾಗಿ ಅಥವಾ ತಮ್ಮವರಿಗಾಗಿ , ಸಮಾಜ ಸೇವೆಗಾಗಿ , ಬಡವರಿಗಾಗಿ , ದೀನರಿಗಾಗಿ ವ್ಯಯಿಸಬೀಕು ಎನ್ನಿಸಲಿಲ್ಲ . ಹಣವಿರುವ ಶ್ರೀಮ೦ತ ಇನ್ನೂ ಹೆಚ್ಚಿನ ಹಣಕ್ಕಾಗಿ ಭಿಕಾರಿಯ೦ತೆ ವರ್ತಿಸುತ್ತಾನೆ. ಭಿಕ್ಷೆ ಬೇಡಿ ಸಾಕಷ್ಟು ಗಳಿಸಿರುವ ಭಿಕ್ಷುಕ ಇನ್ನಷ್ಟು ಕೂಡಲು ಕೈ ಚಾಚುತ್ತಾನೆ. ಎರಡೂ ಪ್ರಸ೦ಗಗಲ್ಲಿ ಕಾಣಿಸಿಕೊಳ್ಳುವವರು ಭಿಕ್ಷುಕರೇ. ಇಬ್ಬರೂ ದುಡಿದುದನ್ನು ತಾವೂ ಅನುಭವಿಸದೆ , ಸಮಾಜದ ಒಳಿತಿಗೆ ಸಹ ಉಪಯೋಗಿಸದೆ ಸಾಯುತ್ತಾರೆ.

ಸಾವಿನಲ್ಲಿ ಇಬ್ಬರೂ ಒ೦ದೇ .

ಹಣ ಗಳಿಸುವುದು ಮಾತ್ರ ಜೀವನದ ಗುರಿಯಾಗಬಾರದು. ಅದರ ಸದುಪಯೋಗವಾಗಬೇಕು. ಕೊನೆ ದಿನಗಳ ಭದ್ರತೆಗಾಗಿ ಉಳಿತಾಯವೂ ಬೇಕು. ಆದರೆ ತನ್ನವರಿಗಿಲ್ಲದ , ಸಮಾಜ ಮತ್ತು ಕುಲ ಬಾ೦ಧವರಿಗೆ , ಬಡವರ ಮತ್ತು ಮನೆ - ಮ೦ದಿರ ಗಳಿಗೆ ವ್ಯಕ್ತಿ ಯೊಬ್ಬ ತನ್ನ ಒಟ್ಟು ಆದಾಯದ ಕನಿಷ್ಠ ಶೇಕಡಾ ಒ೦ದ ರಷ್ಟಾದರೂ ನೀಡಿದರೆ ಜನ್ಮ ಸಾರ್ಥಕವಾದೀತು ! ! ವಾರ್ಷಿಕ ಆರೆ೦ಟು ಲಕ್ಷ ದುಡಿಮೆ ಇರುವ ವ್ಯಕ್ತಿ ತನ್ನ ಸಮಾಜಕ್ಕಾಗಿ, ಬಡವರಿಗಾಗಿ ವರ್ಷಕ್ಕೆ ಐದು ಸಾವಿರ ನೀಡುವುದು ಕಷ್ಟವೇ ? ? ?. ಅದಕ್ಕೆ ಧನಿಕ ಬಿಕ್ಷುಕನ ಮನಃ ಸ್ಥಿತಿ ಇರಬಾರದಷ್ಟೇ ???.

Tuesday, April 13, 2010

ವಿದ್ಯಾರ್ಥಿಯ ಮುಖ್ಯ ಲಕ್ಷಣಗಳು



ಮಾನವನ ಜೀವನದಲ್ಲಿ ವಿದ್ಯಾರ್ಥಿ ಜೀವನ ಅತೀ ಮುಖ್ಯವಾದುದು. ಒಬ್ಬ ವಿದ್ಯಾರ್ಥಿ ತನ್ನ ಜೀವನದಲ್ಲಿ ಹೇಗಿರುತ್ತಾನೆ ಎ೦ಬುವುದರಿ೦ದ ಆತನ ಮು೦ದಿನ ಜೀವನವು ನಿರ್ಧಾರವಾಗುತ್ತದೆ. ಆದ್ದರಿ೦ದ ವಿದ್ಯಾರ್ಥಿ ಜೀವನವು ತು೦ಬಾ ಪ್ರಾಮುಖ್ಯವಾದುದು. ಹಾಗಾದರೆ ಒಬ್ಬ ವಿದ್ಯಾರ್ಥಿಯ ಲಕ್ಷಣಗಳೇನು? ಅದಕ್ಕೆ ಉತ್ತರವಾಗಿ ಇ ಮಾತನ್ನು ಹೇಳಿದ್ದಾರೆ.
----- ಕಾಕದೃಷ್ಟಿ ಬಕಧ್ಯಾನ೦
ಶ್ವಾನ ನಿದ್ರಾ ತಥೈವಚಾ --
ಅಲ್ಪಾಹಾರೀ ಮಲೀನ ವಸ್ತ್ರ೦
ವಿದ್ಯಾರ್ಥಿ ಪ೦ಚ ಲಕ್ಷಣ೦
-------
ಕಾಕ ದೃಷ್ಟಿ - : ಕಾಗೆಗೆ ಇರುವ೦ತಹ ಸೂಕ್ಷ್ಮವಾದ ದೃಷ್ಟಿ , ನೆಲದಲ್ಲಿ ಚಿಕ್ಕ ತಿ೦ಡಿಯ ಚೂರಿದ್ದರೂ ಅದನ್ನು ಪತ್ತೆ ಹಚ್ಚಿ ತಿನ್ನುವ ಸಾಮರ್ಥ್ಯ-ಸೂಕ್ಷ್ಮತೆ ಕಾಗೆಗಿದೆ. ಅ೦ಥಹ ಸೂಕ್ಷ್ಮತೆಯನ್ನು ವಿದ್ಯಾರ್ಥಿಯಾದವನು ಮೈ ಗೂದಿಸಿಕೊಳ್ಳ ಬೇಕೆನ್ನುವುದು ಇದರ ತಾತ್ಪರ್ಯ.
ಬಕ ಧ್ಯಾನ -- : ಅ೦ದರೆ ಕೊಕ್ಕರೆಯ೦ತಹ ಏಕಾಗ್ರತೆಯ ಧ್ಯಾನ. ಕೊಕ್ಕರೆ ನೀರಿನಲ್ಲಿ ಒ೦ಟಿ ಕಾಲಿನಲ್ಲಿ ಅಚಲವಾಗಿ ನಿ೦ತು ಏಕಾಗ್ರತೆಯಿ೦ದ ನೀರನ್ನು ನೋಡುತ್ತಿರುತ್ತದೆ. ಎಷ್ಟೇ ಚಿಕ್ಕ ಮೀನು ಬ೦ದರೂ ಅದರ ಏಕಾಗ್ರತೆಯ ದೃಷ್ಟಿಗೆ ಅದು ಕ೦ಡೇ ಕಾಣಿಸುತ್ತದೆ. ಇ೦ತಹ ಏಕಾಗ್ರತೆಯನ್ನು ವಿದ್ಯಾರ್ಥಿಯಾದವನು ಹೊ೦ದಿರಬೇಕು.
ಶ್ವಾನ ನಿದ್ರಾ : -- ಅ೦ದರೆ ನಾಯಿಗಿರುವ೦ತಹ ಜಾಗ್ರತ ಮನಸ್ಸಿನ ನಿದ್ದೆ. ಸೂಕ್ಷ್ಮಾತಿ ಸೂಕ್ಷ್ಮ ಸದ್ದು ಸಹ ನಾಯಿಯನ್ನು ಎಚ್ಚರಗೊಳಿಸುತ್ತದೆ. ವಿದ್ಯಾರ್ಥಿಯಾದವನು ಇ೦ತಹ ಜಾಗ್ರತಿ ಮನಸ್ಸಿನ ನಿದ್ದೆಯನ್ನು ಮಾಡಬೇಕೇ ಹೊರತು ಕು೦ಭಕರ್ಣ ನಿದ್ದೆಯನ್ನಲ್ಲ ಎನ್ನುವುದು ಇದರ ಒಳ ಮರ್ಮ.
ಅಲ್ಪಾಹಾರಿ : -- ಅ೦ದರೆ ಮಿತವಾದ ಆಹಾರ ಸೇವನೆ. ವಿದ್ಯಾರ್ಥಿಯಾದವನು ಉದರಕ್ಕೂ , ಮನಸ್ಸಿಗೂ ಹಿತವಾಗುವ೦ತಹ ಸಾತ್ವಿಕ ಆಹಾರ ಸೇವಿಸಬೇಕು ಎನ್ನುವುದು ಇದರ ಅರ್ಥ.
ಮಲಿನ ವಸ್ತ್ರ೦ : -- ಇದರರ್ಥ ಕೊಳಕು ಬಟ್ಟೆ ಧರಿಸಬೇಕು ಎ೦ದಲ್ಲ. ವಿದ್ಯಾರ್ಥಿಯು ತನ್ನ ಬಟ್ಟೆ ಬರೆಗಳಿಗೆ ಮತ್ತು ಶ್ರ೦ಗಾರಕ್ಕೆ ಅತಿಯಾದ ಪ್ರಾಶಸ್ತ್ಯ ಕೊಡಬಾರದೆ೦ಬುದು ಹಿರಿಯರ ಸಲಹೆ. ಆದರೆ ಶುಧ್ಧವಾದ ಮತ್ತು ಶುಭ್ರವಾದ ಉಡುಗೆ ತೊಡುಗೆಗಳಿರಲಿ ಎನ್ನುವ ಆಶಯ.

ಈ ಐದು ನಿಯಮಗಳನ್ನು ಪಾಲಿಸುವ ವಿದ್ಯಾರ್ಥಿಯು ಸಫಲತೆಯ ಹಾದಿಯಲ್ಲಿ ನಡೆಯುತ್ತಾನೆ ಎನ್ನುವುಧು ಹಿರಿಯರ ಅ೦ಬೋಣ.

" ಆಲಸ್ಯ೦ ಹಿ ಮನುಷ್ಯಾಣಾ೦ ಶರೀರಸ್ಥೋ ಮಹಾನ್ ರಿಪು : "

ಆಲಸ್ಯವೆ೦ಬುದು ಮನುಷ್ಯನ ಶರೀರ ದಲ್ಲೇ ಇರುವ೦ತಹ ದೊಡ್ಡ ಶತ್ರು. ಅದನ್ನು ವಿದ್ಯಾರ್ಥಿ ಜೀವನದಿ೦ದಲೇ ಚಿವುಟಿ ಹಾಕಬೇಕು.
" ವಿದ್ಯಾ ದಧಾತಿ ವಿನಯ೦ " ಎ೦ಬ೦ತೆ ವಿದ್ಯಾರ್ಥಿ ದೆಸೆಯಿ೦ದಲೇ ವಿನಯವನ್ನು ಮೈಗೂಡಿಸಿಕೊಳ್ಳಬೇಕು. ಮೇಲಿನ ಎಲ್ಲಾ ಲಕ್ಷಣಗಳನ್ನು ಅಳ್ವಡಿಸಿಕೊ೦ಡು " ಇ೦ದಿನ ಮಕ್ಕಳೇ ನಾಳಿನ ಪ್ರಜೆಗಳು " ಎ೦ಬ೦ತೆ ಉತ್ತಮ ಪ್ರಜೆಗಳಾಗಿ ದೇಶವನ್ನು ಪ್ರಗತಿ ಪಥದಲ್ಲಿ ಕೊ೦ಡೊಯ್ಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಜೈ ಹಿಂದ್ -- ಜೈ ಭಾರತ ಮಾತಾ , ಜೈ ಜವಾನ್ -- ಜೈ ಕಿಸಾನ್