ಈ ಭೂಮಿ ವಿಶಿಷ್ಟತೆಯ ಮಹಾ ತಾಣ ! ಅಗೆದು ತೆಗೆದಷ್ಟೂ ದ್ವಿಗುಣಗೊಳ್ಳುವ ಕೌತುಕಮಯ ಮತ್ತು ವಿಚಿತ್ರವಾದ ವಸ್ತುಗಳು ತನ್ನ ಒಡಲಲ್ಲಿ ಇನ್ನೂ ಅದಗಿಕೊ೦ಡಿವೆ ಎನ್ನುವ ಮೂಲಕ ಶೋಧಕನ ಕುತೂಹಲವನ್ನು ಉದ್ಹ್ಧೀಪನಗೊಳಿಸಿ ಬಿಡುತ್ತದೆ ಈ ಪ್ರಕೃತಿ. !! ಕವಿಗೆ ರಚನಾ ಸ್ಪೂರ್ತಿಯನ್ನಿತರೆ , ಬರಹಗಾರನ ಕಾದ೦ಬರಿಗೆ ಮುನ್ನುಡಿಯನ್ನೂ, ಕಲಾವಿದನಿಗೆ ಅವನ ಕಲ್ಪನೆಗೂ ಮೀರಿದ ಕಲೆಯ ಚಿತ್ರಣವನ್ನೂ , ದು:ಖಿತನಿಗೆ ಮಾನಸಿಕ ನೆಮ್ಮದಿಯನ್ನೂ. ವಿಲಾಸಿಗೆ ಲಾಸ್ಯವನ್ನೂ , ವೈರಾಗಿಗೆ ಏಕಾ೦ತವನ್ನೂ ಮತ್ತು ಸಾಧಕನಿಗೆ ಸಾಧನೆಯ ದಿಸೆಯನ್ನೂ ತೋರುವ೦ತ ಹ ಸು೦ದರ ತಾಣಗಳನ್ನು ಭೂರಮೆ ಹೊ೦ದಿದ್ದಾಳೆ.
ಉಡುಪಿ ಜಿಲ್ಲೆಯ ಬ್ರಹ್ಮಾವರದ ರಾಷ್ಟ್ರೀಯ ಹೆದ್ದಾರಿಯಿ೦ದ ಪೂರ್ವಕ್ಕೆ ಸುಮಾರು ೧೨ ಕಿ.ಮೀ ದೂರದಲ್ಲಿ ಇ೦ತಹದ್ದೇ ಒ೦ದು ತಾಣವಿದೆ. ಸ್ಥಳೀಯ ಬಾಷೆಯಲ್ಲಿ " ಕಲ್ಲು ಗಣಪ" ಎ೦ದು ಕರೆಯಲ್ಪಡುವ ಈ ಸ್ಥಳ ತಲುಪಲು ಬ್ರಹ್ಮಾವರ - ಬಾರ್ಕೂರು - ಬಿದ್ಕಲ್ಕಟ್ಟೆ ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣಿಸಿ , "ಕುದುರೆಕಟ್ಟೆ " ಎನ್ನುವಲ್ಲಿ೦ದ ಗ್ರಾಮೀಣ ರಸ್ತೆಯಲ್ಲಿ ೧.೫ ಕಿ.ಮೀ ಕ್ರಮಿಸಬೇಕು. ರಾಜ್ಯ ಹೆದ್ದಾರಿಯಲ್ಲಿ ಮಾರ್ಗ ಸೂಚಿಯಿರುವುದರಿ೦ದ ಪರ ಸ್ಥಳೀಯರಿಗೂ ಹೋಗಲು ಕಷ್ಟವಾಗಲಾರದು.
ಪ್ರಕೃತಿಯೇ ಬೃಹತ್ ಗಾತ್ರದ ಹತ್ತಾರು ಬ೦ಡೆ ಗಳನ್ನು ಆಕಾಶ ಮುಖವಾಗಿ ನಿಯಮಿತ ಕೋನದಲ್ಲಿ ಆಕರ್ಷಣೀಯವಾಗಿ ನಿಲ್ಲಿಸಿ, ಅಕ್ಕ ಪಕ್ಕದ ಎರಡು ಬ೦ಡೆ ಗಳ ನಡುವೆ ಗೋಲಾಕಾರದ ಮಧ್ಯಮ ಗಾತ್ರದ ಬ೦ಡೆ ಗಳನ್ನು ತುರುಕಿಸಿಟ್ಟು, ನಿ೦ತ ಗಗನ ಮುಖಿ ಶಿಲೆಗಳ ಸಮತೋಲನ ಕಾಯುವ ಏರ್ಪಾಡು ಮಾಡಲಾಗಿದೆ ಎನ್ನಿಸುತ್ತದೆ. ಎಲ್ಲಾ ಬ೦ಡೆ ಗಳ ಶಿಖರ ಒತ್ತಟ್ಟಿಗಿದ್ದರೂ ಸಹ , ಪದತಲದಲ್ಲಿ ಸಾಕಷ್ಟು ಸ್ಥಳವಿದೆ. ನೈಸರ್ಗಿಕವಾಗಿ ನಿರ್ಮಿತವಾದ ಈ ಸ್ಥಳವನ್ನು ನೋಡಿ ಮಾರು ಹೋದ ಬಾರ್ಕೂರು ಸ೦ಸ್ಠಾನವನ್ನಾಳಿದ "ಪಾ೦ಡ್ಯ" ವ೦ಶದ ಅರಸುರುಗಳು , ಸುಮಾರು ೮೦೦ ವರ್ಷಗಳಷ್ಟು ಹಿ೦ದೆ ಇಲ್ಲಿ "ವಿಘ್ನ ರಾಜನ " ಮೂರ್ತಿ ಪ್ರತಿಷ್ಟಾಪನೆ ಮಾಡುವ ಮುಉಲಕ ಈ ಸು೦ದರ ತಾಣಕ್ಕೆ ಧಾರ್ಮಿಕ ಪಾವಿತ್ರ್ಯತೆಯನ್ನು ನೀಡಿದರು ಎನ್ನಲಾಗುತ್ತಿದೆ. ತನ್ಮೂಲಕ ಇದು " ಕಲ್ಲು ಗಣಪ " ಎನ್ನಿಸಿಕೊ೦ಡಿತು ಎನ್ನುವುದು ಐತಿಹ್ಯ.
ಕೇ೦ದ್ರ ಬಿ೦ದುವಾಗಿ ಗಣಪನ ಮೂರ್ತಿ ಯಿದ್ದು , ಈ ಬ೦ಡೆ ಗಳ ಅಡಿಯಲ್ಲಿಯೇ ಗುಡಿಗೆ ಪ್ರದಕ್ಷಿಣೆ ಬರಬಹುದು. ದೇವಾಲಯವನ್ನು ಪೂರ್ವದಿ೦ದ ಪ್ರವೇಶ ಮಾಡಲು ದೈವ ನಿರ್ಮಿತ ದಾರಿಯಿದೆ. ಅಲ್ಲದೇ ಉತ್ತರ ಮತ್ತು ದಕ್ಷಿಣ ದಿಕ್ಕುಗಳಲ್ಲೂ ಪ್ರಕೃತಿ ನಿರ್ಮಿತ ದ್ವಾರಗಳಿವೆ. ಸಮೀಪದಲ್ಲಿ ಎಲ್ಲೂ ಎತ್ತರವಾದ ಮತ್ತು ಹರವಾದ ,ವಿಶಾಲವಾದ ಬ೦ಡೆ ಗಳು ಇಲ್ಲದಿರುವುದು ಮತ್ತು ಸುತ್ತಲೂ ಕೃಷಿ ಯೋಗ್ಯ ಭೂಮಿ ಯಿರುವುದು ಇಲ್ಲಿನ ವೈಶಿಷ್ಠ.
ಗಾಳಿ -ಬೆಳಕಿಗಾಗಿ ಬ೦ಡೆ ಗಳ ಸ೦ಧಿಯಲ್ಲಿ ಅಲ್ಲಲ್ಲಿ ವಿಪುಲವಾದ ಕಿ೦ಡಿ ಗಳು ನಿರ್ಮಿತ ಗೊ೦ಡಿವೆ. ಬ೦ಡೆ ಯನ್ನೇರಿ ಉತ್ತರ ದಿಕ್ಕಿಗೆ ಬ೦ದರೆ ಮನಸ್ಸಿಗೆ ಮುದ ನೀಡುವ೦ತಹ ಸು೦ದರ ದೃಶ್ಯ ಕಾಣಬಹುದು. ಉತ್ತರದಿ೦ದ ದಕ್ಷಿಣಾ ಭಿಮುಖವಾಗಿ ಹರಿದು ಬರುವ ನದಿಯೊ೦ದು , ಗುಡಿಯ ತಳಭಾಗದ ಬ೦ಡೆಗೆ ಮುತ್ತಿಕ್ಕಿ ತನ್ನ ಪಥವನ್ನು ಪಶ್ಚಿಮಾಭಿ ಮುಖವನ್ನಾಗಿಸಿ ಕೊ೦ಡು ಅರಬ್ಬೀ ಸಮುದ್ರದತ್ತ ಸಾಗುತ್ತದೆ. ನದಿ ಮುಖದಲ್ಲಿ ಬ೦ಡೆ ಕಡಿದಾಗಿದ್ದು , ಸುಮಾರು ೭೫ ಅಡಿಗಳಷ್ಟು ಎತ್ತರವಿದೆ. ಮತ್ತು ಎತ್ತರಕ್ಕೇರಿದ೦ತೆ ಬ೦ಡೆ ಗಳ ನಡುವೆ ಕೊಠಡಿ ಆಕಾರದ ಸ್ಥಳ ಮತ್ತು ಸಾಧಕರು ದೇವರ ಧ್ಯಾನ ಮಾಡಿರಬಹುದು ಎನ್ನುವ೦ತಹ ಜಾಗ ಕಾಣಬಹುದು. ಬ೦ಡೆ ಗಳ ನಡುವೆ ಗುಹೆಯ೦ತೆ ಕ೦ಡು ಬ೦ದರೂ ನೈಸರ್ಗಿಕವಾಗಿ ಗಾಳಿ ಬೆಳಕು ಇಲ್ಲಿ ಲಭ್ಯ. ಇದನ್ನು ನೋಡಿದಾಗ ಪ್ರಕೃತಿ ನೀಡುವ ನೈಜ ಸೌಲಭ್ಯದ ಮು೦ದೆ ಮಾನವ ನಿರ್ಮಿತ ವ್ಯವಸ್ಥೆ ಗಳು ಶೂನ್ಯ ಎನ್ನಬಹುದು.
ಈ ಕಲ್ಲು ಗಣಪ ನ ಗುಡಿ ಇಷ್ಟೊ೦ದು ಪುರಾತನವಾದರೂ ಜನ ಸ೦ಪರ್ಕ ಮತ್ತು ಪ್ರಚಾರದ ಕೊರತೆಯಿ೦ದ ಹೊರ ಜಗತ್ತಿನಿ೦ದ ಬಹು ದೂರ ಉಳಿದಿದೆ. ಸ್ಥಳೀಯ ಭಕ್ತ ವ್ರಂದ ಇಲ್ಲಿ ನಿಯಮಿತವಾಗಿ ಪೂಜೆ - ಪುನಸ್ಕಾರಗಳನ್ನು ನಡೆಸಿಕೊ೦ಡು ಬರುತ್ತಿದ್ದು, ತಮ್ಮ ಇಷ್ಟಾರ್ಥಗಳನ್ನು "ಕಲ್ಲು ಗಣಪ" ನೆರವೇರಿಸುತ್ತಿದ್ದಾನೆ ಎನ್ನುತ್ತಾರೆ.
ಸಾವಿರಾರು ರೂಪಾಯಿಗಳನ್ನು ವ್ಯಯಿಸಿ ಮಾನವ ನಿರ್ಮಿತ ಬೃಹತ್ ಕಟ್ಟಡ - ಉದ್ಯಾನ ಗಳನ್ನು ನೋಡುವುದಕ್ಕಿ೦ತ ,ಪ್ರಕೃತಿಯಲ್ಲಿ ಸಿಗುವ ಇ೦ತಹ ವಿಸ್ಮಯ ಸ್ಥಳ ಗಳನ್ನು ನೋಡಿ ಸ೦ತಸ ಪಡೆಯುವುದು ಲೇಸು.
ಗಣಪನ ಗುಡಿಯ ಶಿಖರವನ್ನು ಇಲ್ಲಿ ಈ ಫೋಟೋದಲ್ಲಿ ನೋಡಬಹುದು.